ಬಿಗ್ ಬಾಸ್ ಕನ್ನಡ ಸೀಸನ್ 5 : ಕೃಷಿ ತಾಪಂಡ ಬಗ್ಗೆ ಮಾತನಾಡಿದ ರಿಯಾಜ್ ಭಾಷಾ | Filmibeat Kannada

2017-12-15 1

Bigg Boss Kannada 5: Week 9: Riaz Basha expressed his opinion about Krishi Thapanda, who re-entered the house in 6th week.


'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಐದನೇ ವಾರ ಔಟ್ ಆಗಿದ್ದ ನಟಿ ಕೃಷಿ ತಾಪಂಡ, ಆರನೇ ವಾರ 'ಬಿಗ್ ಬಾಸ್' ಮನೆಗೆ ಮರಳಿದರು. ಒಂದು ರೌಂಡ್ ಹೊರಗೆ ಹೋಗಿ ವಾಪಸ್ ಬಂದ್ಮೇಲೆ, ಕೃಷಿ ಬದಲಾಗಿದ್ದಾರೆ ಎಂಬ ಭಾವನೆ ಸ್ಪರ್ಧಿಗಳಲ್ಲಿ ಇತ್ತು. ಈಗಲೂ ಹಾಗೇ ಇದೆ. ಹೊರಗೆ ಹೋಗಿ ತಮ್ಮ ತಪ್ಪನ್ನ ತಿದ್ದುಕೊಂಡು ಬಂದಿರುವ ಕೃಷಿ ಈಗ ತಮ್ಮ ಆಟದ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಎಂಬುದು ರಿಯಾಝ್ ಅವರ ಅಭಿಪ್ರಾಯ.''ಐದನೇ ವಾರಕ್ಕೆ ಹೋದ ಹುಡುಗಿ ಆರನೇ ವಾರಕ್ಕೆ ಬಂದಳು. ಅವಳಿಗೆ ಈಗ ಎಲ್ಲೆಲ್ಲಿ ಏನೇನು ತಿದ್ದಿಕೊಳ್ಳಬೇಕು ಅಂತ ಗೊತ್ತಿದೆ. ಆಕೆ ಮುಂಚೆಯಿಂದಲೂ ಒಳ್ಳೆಯ ಹುಡುಗಿ. ಆದ್ರೆ ಈಗ ಆಕೆ ಆಡುವ ರೀತಿ ಬದಲಾಗಿದೆ. ಮುಂಚೆ ಕಿರುಚಾಡುತ್ತಿದ್ದಳು. ಈಗ ಕಿರುಚಾಡುತ್ತಿಲ್ಲ. ಜನ ಯಾಕೆ ಇಷ್ಟ ಪಡಲಿಲ್ಲ ಅಂತ ಅವಳಿಗೆ ಗೊತ್ತಾಗಿದೆ. ಸೆಕೆಂಡ್ ಚಾನ್ಸ್ ಸಿಕ್ಕಿರುವುದರಿಂದ ಗೆಲ್ಲಬೇಕು ಎಂಬ ಛಲ ಬಂದಿದೆ'' ಎಂದು ಜಯಶ್ರೀನಿವಾಸನ್ ಜೊತೆ ಕೃಷಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ ರಿಯಾಝ್.

Videos similaires